SUPPORT THE FIGHT TO UPHOLD CONSTITUTIONAL VALUES

Your contribution will help sustain our efforts in providing subsidised legal assistance and initiating and participating in advocacy efforts to realise the imagination of a society based on the tenets of the Constitution.

MAKE YOUR DONATION

In compliance with tax regulations, donations from Indian nationals are required to be collected separately. 

If you are an Indian citizen and/or have an Indian passport, please click the following button to securely donate to ALF. 

NON-INDIAN CITIZENS

If you are not an Indian national and are interested to donate to ALF, please write to communications (at) altlawforum.org.

ಲೈಂಗಿಕ ವೃತ್ತಿ, ಕಾನೂನು ಮತ್ತು ಘನತೆಗಾಗಿ ನಡೆಯುತ್ತಿರುವ ನಿರಂತರ ಹೋರಾಟ

Event

ಲೈಂಗಿಕ ಕಾರ್ಯಕರ್ತರ ಮೇಲೆ ಸರ್ಕಾರ ಹಾಗೂ ಸಾರ್ವಜನಿಕರು ಹಲವು ದಶಕಗಳಿಂದಲೂ ಹಿಂಸೆಯನ್ನು ನಡೆಸುತ್ತಿದ್ದು ಅವರ ವಿರುದ್ಧ ಹಿಂಸಾಚಾರದ ಅನೇಕ ಘಟನೆಗಳು ನಡೆದಿವೆ. ಹಲವಾರು ವರ್ಷಗಳಿಂದ ಇದೊಂದು ಮರುಕಳಿಸುತ್ತಿರುವ ಸಮಸ್ಯೆಯಾಗಿದ್ದು ಕಾನೂನು ಜಾರಿಗೊಳಿಸುವ ಇಲಾಖೆಯ ಸಿಬ್ಬಂದಿಗಳೇ ಸಾರ್ವಜನಿಕ ಸ್ಥಳಗಳಲ್ಲಿಯೇ ಇವರಿಗೆ ಕಿರುಕುಳ ನೀಡುವುದು ಸಾಮಾನ್ಯ ಸಂಗತಿಯಾಗಿದೆ. ಲೈಂಗಿಕ ಕಾರ್ಯಕರ್ತಿರಾಗಿ ಗುರ್ತಿಸಲ್ಪಟ್ಟಿರುವದರಿಂದ ಇವರು ನಗರದ ಹಲಾವಾರು ಪ್ರದೇಶಗಳಲ್ಲಿ ಸ್ವತಂತ್ರ್ಯವಾಗಿ ಓಡಾಡುವ ಹಕ್ಕಿನ ಮೇಲೆ ಅಸಂವಿಧಾನಕಿಕ ನಿರ್ಬಂಧಗಳಿವೆ. ಲೈಂಗಿಕ ಕಾರ್ಮಿಕರ ಚಲನೆಗೆ ಅಡ್ಡಿಪಡಿಸುವುದು, ಅವರನ್ನು ಥಳಿಸುವುದು ಹಾಗೂ ಕಾನೂನುಬಾಹಿರವಾಗಿ ಅವರನ್ನು ಸೆರೆ ಹಿಡಿಯುವುದು, ಇಂತಹ ಘಟನೆಗಳಿಂದಾಗಿ ಅವರ ಮೇಲೆ ನೇರ ಪರಿಣಾಮ ಬೀರುವುದಲ್ಲದೆ, ಅವರ ಕುಟುಂಬಸ್ಥರು ಹಾಗೂ ಅವರ ಪುಟ್ಟ ಮಕ್ಕಳೂ ಸಹ ತೊಂದರೆ ಅನುಭವಿಸಬೇಕಾಗುತ್ತಿದೆ. ಲೈಂಗಿಕ ಕಾರ್ಯಕರ್ತರ ಮೇಲೆ ಈ ರೀತಿಯ ದಾಳಿಗಳು ಸಂಪೂರ್ಣವಾಗಿ ಕಾನೂನುಬಾಹಿರವಾಗಿ ಇರುವುದಷ್ಟೇ ಅಲ್ಲದೆ, ಅಸಾಂವಿಧಾನಿಕ ಹಾಗೂ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ.

ಕಳೆದ ಹಲವು ದಶಕಗಳಲ್ಲಿ ಲೈಂಗಿಕ ಕೆಲಸ ಎಂದರೇನು ಎನ್ನುವುದರ ವ್ಯಾಖ್ಯಾನವು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಮೇಣವಾಗಿ ವಿಕಸನಗೊಂಡಿದೆ. ಇದರಿಂದಾಗಿ, ಲೈಂಗಿಕ ಕಾರ್ಯಕರ್ತರನ್ನು ಕೀಳಾಗಿ ಕಾಣುವ ಮತ್ತು ಅವರ ಹಕ್ಕನ್ನು ಕಸಿಯುವ ಸಂಭಾಷಣೆಗಳಾದ ಪಿತೃಪ್ರಧಾನಿಕ, ನೈತಿಕ, ಹಾಗೂ ಪೋಷಣಾತ್ಮಕ ದೃಷ್ಟಿಕೋನಗಳಿಂದ ರಚನಾತ್ಮಕವಾಗಿ ಹಾಗೂ ಸಂಸ್ಥಿಕವಾಗಿ ಅವರನ್ನು ಸಬಲೀಕರಿಸುವ ಮತ್ತು ಸಶಕ್ತಿಗೊಳಿಸಿ ಅವರ ಆಯ್ಕೆಗಳನ್ನು ಆಯ್ದುಕೊಳ್ಳುವ ಅಧಿಕಾರವನ್ನು ನೀಡುವ ಕಡೆಗೆ ಬದಲಾಗಿದೆ. ಆದರೆ, ಕಾನೂನು ಮತ್ತು ರಾಜ್ಯ ಸರ್ಕಾರದ ಇಲಾಖೆಗಳು ಈಗಲೂ ಸಹ ಲೈಂಗಿಕ ಕೆಲಸ ಹಾಗೂ ಲೈಂಗಿಕ ಕಾರ್ಯಕರ್ತರ ಕುರಿತು ಪುರಾತನ ದೃಷ್ಟಿಕೋನವನ್ನೇ ಹೊಂದಿವೆ.

ಸೆಪ್ಟೆಂಬರ್ 2022ರಲ್ಲಿ ಸರ್ಕಾರದ  ದೌರ್ಜನ್ಯದ ವಿರುದ್ಧ ಸಾಧನಾ ಮಹಿಳಾ ಸಂಘದ ಇಬ್ಬರು ಸದಸ್ಯರು, ಪಿಯುಸಿಎಲ್ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ) ಮುಖಾಂತರ ದಾಖಲಿಸಿದ ದೂರಿಗೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು (ಕೆಎಸ್‍ಹೆಚ್‍ಆರ್‍ಸಿ), ಲೈಂಗಿಕ ಕಾರ್ಯಕರ್ತರ ಹಕ್ಕುಗಳಾದ ಘನತೆ, ಸಮಾನತೆ ಮತ್ತು ಕಾನೂನಿನ ಸಮಾನ ರಕ್ಷಣೆಯನ್ನು ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಸುವ್ಯವ್ಯಸ್ಥೆಯನ್ನು ಎತ್ತಿ ಹಿಡಿಯುವ ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ಎತ್ತಿಹಿಡಿಯಿತು. ಅಲ್ಲದೆ, ಸಂತ್ರಸ್ತ ಮಹಿಳೆಯರಿಗೆ ತಲಾ ರೂ.20,000/- ಪರಿಹಾರ ನೀಡುವಂತೆಯೂ ಸೂಚಿಸಿ ಆದೇಶ ಹೊರಡಿಸಿದೆ. ಮಹಿಳೆಯರಿಗೆ ಇದೊಂದು ಸುದೀರ್ಘವಾದ ಕಾನೂನು ಹೋರಾಟವಾಗಿದ್ದರೂ ಸಹ, ಅವರ ಘನತೆಯ ಬದುಕಿನ ಹಕ್ಕಿನ ಹೋರಾಟಕ್ಕೆ ಈ ಆದೇಶವು ಒಂದು ಮೈಲಿಗಲ್ಲಾಗಿದೆ.

ಬೆಂಗಳೂರಿನಲ್ಲಿ ಲೈಂಗಿಕ ಕಾರ್ಯಕರ್ತರ ಚಳುವಳಿಯ ಹಾದಿಯನ್ನು ಅರ್ಥ ಮಾಡಿಕೊಳ್ಳುವ ಕುರಿತು ಶನಿವಾರ , 04.02.2023ರಂದು ಬೆಳಗ್ಗೆ  11.30 ಗಂಟೆಗೆ ಒಂದು ಸಂವಾದವನ್ನು ಏರ್ಪಡಿಸಲಾಗಿದೆ. ಈ ಸಂವಾದದಲ್ಲಿ ಈವರೆಗಿನ ಹಾದಿಯ ಸವಾಲುಗಳು, ಯಶಸ್ಸು ಹಾಗೂ ಸಮುದಾಯದವರ ಘನತೆಗಾಗಿ ಹೋರಾಟದಲ್ಲಿ ಕೆಎಸ್‍ಹೆಚ್‍ಆರ್‍ಸಿಯ ಇತ್ತೀಚಿನ ಮಹತ್ವದ ಆದೇಶದ ಕುರಿತು ಚರ್ಚೆಯಾಗಲಿದೆ. ದಯಮಾಡಿ ನಮ್ಮೊಂದಿಗೆ ಸೇರಿಕೊಳ್ಳಿ!

Sex work, law and the perennial fight for dignity

The sex workers community has been facing numerous incidents of violence both at the hands of the state and the public for decades. For years now, it has been a recurring pattern for the law enforcement agencies to harass and intimidate sex workers up in public. They are being denied the freedom to move in/access certain areas of the city, simply because they are identified as sex workers. In doing this, their right to freedom of movement is being infringed upon. To impede them in their movement, to assault them and detain them illegally with absolute impunity, affects not only them, but also their families and minor children.

Needless to say, these attacks on the sex workers’ community are wholly illegal, unconstitutional and violative of their fundamental rights. It is pertinent to note that the understanding of what constitutes sex work has progressively evolved both globally and nationally in the last few decades. The conversation has moved away from patriarchal, moralistic, and patronising approaches that end up infantilising the woman, divesting her of agency, towards ensuring structural and institutional changes that enable and empower her to make her own choices. However, the law and state agencies still hold an antiquated understanding of sex work and sex workers.

In September, 2022, in a complaint filed by two sex workers against State violence, the Karnataka State Human Rights Commission (KSHRC) held that the sex workers’ right to dignity, equality and equal protection of law had been violated by the law enforcement agencies in the instant case. It further went on to award a compensation of Rs. 20,000/- each to the affected women. Although it has been a long legal fight for the women, the order signifies an important landmark in their battle for dignity.

Join us this Saturday (04.02.2023 at 11.30 AM) for a conversation on understanding the journey of the sex workers’ movement in Bangalore, its successes and challenges so far as also the significance of the recent KSHRC in the community’s fight for dignity.

Post a comment